¡Sorpréndeme!

ಚಂದನ್ ಶೆಟ್ಟಿ ಮಾಸ್ಟರ್ ಡ್ಯಾನ್ಸರ್ ಷೋಗೆ ಜಡ್ಜ್ ಆಗಿರೋದು ಇದೆ ಕಾರಣಕ್ಕೆ | Filmibeat Kannada

2018-02-07 462 Dailymotion

Bigg Boss Kannada 5 Winner Chandan Shetty explains why he is a judge for 'Master Dancer' reality show.


ಕಲರ್ಸ್ ಸೂಪರ್ ವಾಹಿನಿಯಲ್ಲಿ ಶುರು ಆಗಿರುವ 'ಮಾಸ್ಟರ್ ಡ್ಯಾನ್ಸರ್' ಡ್ಯಾನ್ಸ್ ರಿಯಾಲಿಟಿ ಶೋಗೆ ನಟಿ ಶ್ರುತಿ ಹರಿಹರನ್ ಹಾಗೂ 'ನಾಟ್ಯ' ಮಯೂರಿ ತೀರ್ಪುಗಾರರ ಸ್ಥಾನ ಅಲಂಕರಿಸಿದ್ದಾರೆ. ಇವರಿಬ್ಬರ ಮಧ್ಯೆ 'ಬಿಗ್ ಬಾಸ್ ಕನ್ನಡ-5' ವಿನ್ನರ್, ಕನ್ನಡ Rapper ಚಂದನ್ ಶೆಟ್ಟಿ ಕೂಡ ಜಡ್ಜ್ ಆಗಿದ್ದಾರೆ. ''ಎಲ್ಲಾ ಓಕೆ ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಜಡ್ಜ್ ಯಾಕೆ.? ಅವರು ಡ್ಯಾನ್ಸರ್ ಅಲ್ಲ.!'' ಎಂಬ ಕಾಮೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಬರುತ್ತಿವೆ. ಕೇವಲ ಟಿ.ಆರ್.ಪಿಗಾಗಿ ಚಂದನ್ ಶೆಟ್ಟಿ ಅವರನ್ನ ನಿರ್ಣಾಯಕರ ಸ್ಥಾನದಲ್ಲಿ ಕೂರಿಸಲಾಗಿದೆ ಎಂಬ ಕಾರಣಕ್ಕೆ ಮುನಿಸಿಕೊಂಡವರೂ ಇದ್ದಾರೆ. ಫೇಸ್ ಬುಕ್ ನಲ್ಲಿ ಚಂದನ್ ಶೆಟ್ಟಿ ಆಯ್ಕೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವಾಗಲೇ, 'ಮಾಸ್ಟರ್ ಡ್ಯಾನ್ಸರ್' ಶೋನಲ್ಲಿ ಚಂದನ್ ಶೆಟ್ಟಿ 'ಹೇಗೆ ಜಡ್ಜ್ ಮಾಡುವೆ?' ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.